ಕ್ಲಬ್ ಗಳು ಶಾಲಾ ಅಭಿವೃದ್ಧಿಗೆ ಅತ್ಯಗತ್ಯ
ನಮ್ಮೀ ಶಾಲಾ ವಿವಿಧ ಕ್ಲಬ್ ಗಳ ಉದ್ಘಾಟನೆಯು ೨೪. ೬. ೨೦೧೫ ಬುಧವಾರದಂದು ಶಾಲಾ ಸಭಾಭವನದಲ್ಲಿ ಮುಖ್ಯೋಪಾಧ್ಯಾಯರ ಅಧ್ಯಕ್ಷತೆಯಲ್ಲಿ ನಡೆಯಿತು . ಶಾಲಾ ವಿದ್ಯಾರ್ಥಿಗಳಿಂದನೃತ್ಯ ವೈವಿದ್ಯ ನಾಟಕಾಭಿನಯ ಹಾಗೂ ಪ್ರತಿ ಗುಂಪುಗಳ ವಿದ್ಯಾರ್ಥಿ ಪ್ರತಿನಿಧಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ಮಂಡಿಸಿದರು . ಆ ಬಳಿಕ ಹಾಡುಗಾರಿಕೆ ಹಾಗೂ ಹಾಸ್ಯ ಪ್ರಸಂಗದ ಮಂಡನೆ ಯು ಎಲ್ಲರನ್ನು ನಗುವಿನ ಹೊನಲಿನತ್ತ ಕೊಂಡೊಯ್ಯಿತು. ಸತೀಶ್ ಮಾಸ್ತರರ ಸ್ವಾಗತದೊಂದಿಗೆ ಆರಂಭಗೊಂಡ ಕಾರ್ಯಕ್ರಮವು ಅಬ್ದುಲ್ ಸಲಾಂ ಮಾಸ್ತರರ ವಂದನಾರ್ಪಣೆಯೊಂದಿಗೆ ಮುಕ್ತಾ ಯಗೊಂಡಿತು, ಮೃದುಲ ಟೀಚರ್ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment