Childrens Corner


ತಾಯಿಯ ಮಮತೆ 


ಭೂಮಿಗೆ ತಂದ ಜನ್ಮದಾತೆ 
ಮಮತೆಯ ಅರ್ಥ ತಿಳಿಸಿದ ಮಾತೆ 
ತಪ್ಪನು ತಿದ್ದಿ ಕಲಿಸಿದೆ ಬುದ್ಧಿ 
ಮಕ್ಕಳೇ ನನ್ನ ಸರ್ವಸ್ವ ಎಂದೆ II 

ನೀತಿ ಪಾಠ ಕಲಿಸಿದೆ ನೀನು 
ನಿನ್ನಯ ಕರುಣೆಗೆ ಉತ್ತರ ಬಾನು 
ಭೂಮಿಯ ತಾಳ್ಮೆ ನಿನ್ನಲ್ಲಿರಲು 
ಸುಂದರ ನಮ್ಮಯ ನೆಮ್ಮದಿ ಬಾಳು II 

ಕಷ್ಟವ ಸಹಿಸಿ ನೆಮ್ಮದಿ ತಂದೆ 
ಬಾಳಿಗೆ ನೀನೆ ಆದರ್ಶವಾದೆ 
ತಾಯಿಯ ಪ್ರೀತಿ ಆಕಾಶದಷ್ಟು 
ಮುಟ್ಟಲು ಆಗದು ಕೈ ಚಾಚಿದಷ್ಟು II 

ತಾಯಿಯ ಪ್ರೀತಿ  ಬಣ್ಣಿಸಲಾಗದು 
ಅವಳ ಮಹಿಮೆ ತಿಳಿಸಲಾಗದು 
ಯಾವುದೆ ಸಮಯದಿ ಕೈ ಬಿಡದೆ 
ಸೋತಾಗ ಗೆಲುವಿನ ದಾರಿ ತೋರಿದೆ II 

ಎದ್ದರೂ ಬಿದ್ದರೂ ಜೊತೆಗಿದ್ದೆ ನೀನು 
ಮಕ್ಕಳ ಪಾಲಿಗೆ ಆದೆ ಕಣ್ಣು 
ದೇವರ ಸ್ವರೂಪವಾಗಿ ಬಂದೆ 
ಪ್ರೀತಿಯ ಅರ್ಥವ ತಿಳಿಸುತ ನಿಂದೆ II 

ಜಯಶ್ರೀ. ಕೆ 
VIII ಬಿ ತರಗತಿ
  




ಶಾಲಾ ಯುವಜನೋತ್ಸವದಲ್ಲಿ  ಪ್ರಥಮ ಬಹುಮಾನ ಗಳಿಸಿದ ಕವನ  

ಪ್ರಕೃತಿ  ಸೌಂದರ್ಯ

  

ಸುಂಧರೆಯ  ಸೌಂದರ್ಯ  ನೀ  ಪ್ರಕೃತಿ  
ಸೂರ್ಯನೊಬ್ಬನೇ  ನಿನಗೆ ಹೊನ್ನಿನ  ಮೂಗುತಿ 
ಚಳಿ ಮಳೆ ಬಿಸಿಲ ಬೇಗೆಗೂ ನೀ ಸಾಗುತಿ 
ನಿನಗಾರು ಸತಿ ಹೇಳೇ ಪ್ರಕೃತಿ 
                           
ಕಣ್ಣಂಚಿನಲ್ಲಿ ತುಂಬು ತಿದೆ  ಹಸಿರು
ಇದುವೇ ಅಲ್ಲವೇ ಜೀವಜಾಲದ ಉಸಿರು
ನವರತ್ನಗಳ  ಮಣಿ ಶೃಂಗಾರ
ನಿನ್ನ ಸೃಷ್ಟಿ ಯನು  ಹೇಳುವ ಕವಿತೆ ಸುಮಧುರ ।।


ಕವನ 

ಎನ್ನ ಸಾಮರ್ಥ್ಯ ಸಾಲದಾಯಿತೆ ಪ್ರಕೃತಿ
ನಿನ್ನ ಗುಣಗಾನಕ್ಕೆ ಸಿಗದಾಯಿತೆ ಸ್ತುತಿ
ನಾನಿಂದು ಸೋತೆ ನಾನಿಂದು ಸೋತೆ
ನಿನ್ನ ಸೃಷ್ಟಿ ಸೌಂದರ್ಯಕೆ ಮನಸೋತೆ
ನಿನ್ನ ಸೌಂದರ್ಯವನು ಕೊಂಡಾಡಲಸಾಧ್ಯ
ಈ ಕವಿತೆ ನಿನ್ನ ಪದತಳಕ್ಕೆ ಸಮರ್ಪಿಸುವೆ
ನನ್ನ ತಪ್ಪನು ಮರೆತು ಸಲಹೆನ್ನ  ಮಾತೆ
           ಎಲ್ಲರನು ರಕ್ಷಿಸಲು  ಮರೆಯದಿರು ತಾಯೆ            



ಕವನ 

ಹೆತ್ತಬ್ಬೆಯ ಸ್ವರೂಪ  ನಿನ್ನ ಮಮತೆ
ಆ ತಾಯಿಯು ನಾಚುವಳು ನಿನ್ನ ಪ್ರೀತಿಗೆ
ಮುಂಜಾನೆಯಲ್ಲಿ ನಗುವ ನೀರೆ
ನಿನಗಿದೋ ಹಸಿರ ಸೀರೆ
ಮುಸ್ಸಂಜೆಯ ಸೂರ್ಯ ನಮಸ್ಕಾರ
ಸರ್ವಸುರರಿಂದಲೂ ಪೂಜಿಸಲ್ಪಡುವುದು ನಿನ್ನ ಓಂಕಾರ
ವನ್ಯ ಜೀವಿಗಳೇ ನಿನಗೊಡವೆ
ದಿನದಿನವೂ ಧರಿಸಿ ಕಾಯುವೆ      
ಭ್ರಮರವೇ ನಿನಗೆ ಅಲಂಕಾರ
ಹಕ್ಕಿಪಕ್ಕಿಗಳು ನೀನಾಡುವ ಸ್ವರವೇ ?
ನಿನಗಿದೋ ಮಂಗಳವಾಗಲಿ
ನಿನ್ನ ಹಸಿರ ರಂಗಿಗೊಂದು ಮೆರುಗಾಗಲಿ ಈ ಕವಿತೆ
ನದಿ ದೇವತೆ ನಿನ್ನ ಗೆಳತಿ ಓ ಅರಸಿ
ಸರ್ವರ ಜೀವನ ಸುಗಮಗೊಳಿಸು ನೀ ಹರಸಿ     


                       



No comments:

Post a Comment

Popular Posts