Sunday 30 August 2015

ಸ್ವಾತಂತ್ರ್ಯ  ದಿನೋತ್ಸವ
ಶ್ರೀ ವಿದ್ಯಾವರ್ಧಕ  ಹೈಯರ್ ಸೆಕೆಂಡರಿ  ಶಾಲೆಯಲ್ಲಿ    ಸ್ವಾತಂತ್ರ್ಯೋತ್ಸವ ವು  ಅದ್ದೂರಿಯಿಂದ  ನಡೆಯಿತು . ಶಾಲಾ ಪ್ರಬಂಧಕಿ ಶ್ರೀಮತಿ 
ಪ್ರೇಮಾ  ಕೆ.   ಭಟ್ ಅವರು   ಧ್ವಜಾರೋಹಣಗೈದರು . ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾನ ಶಿವಶಂಕರ ಭಟ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಯಪಡಿಸಿದರು . ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕಿ  ಶ್ರೀಮತಿ  ಪ್ರೇಮಾ ಕೆ . ಭಟ್  ವಹಿಸಿ, ವಿದ್ಯಾರ್ಥಿಗಳಲ್ಲಿ ಪರಸ್ಪರ  ಪ್ರೀತಿ ವಿಶ್ವಾಸವಿರಬೇಕು,ಐಕ್ಯವಿರಬೇಕೆಂಬ     ಸಂದೇಶವನ್ನು ನೀಡಿದರು.ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ದಿನೇಶ್ ಅಮ್ಮೆನಡ್ಕ ಮತ್ತು ಮಾತೃ ಮಂಡಳಿ ಅಧ್ಯಕ್ಷೆ ಹರಿಣಾಕ್ಷಿ ಉಪಸ್ಥಿ ತರಿದ್ದರು   ಸರಕಾರದಿಂದ ಕೊಡಮಾಡಿದ ಸಮವಸ್ತ್ರ ವಿತರಣೆಯು ಇದೇ ಸಂಧರ್ಭದಲ್ಲಿ ನಡೆಯಿತು .         ಶಾಲಾ ಮುಖ್ಯೋಪಾಧ್ಯಾಯರಾದ ಸದಾಶಿವ ಭಟ್  ಸ್ವಾಗತಿಸಿ , ಹಿರಿಯ ಅಧ್ಯಾಪಿಕೆ ಲಲಿತ ಟೀಚರ್ ವಂದನಾರ್ಪಣೆಗೈದರು  . ರೂಪಶ್ರೀ  ಟೀಚರ್ ಕಾರ್ಯಕ್ರಮ ನಿರೂಪಿಸಿದರು . ವಿದ್ಯಾರ್ಥಿಗಳಿಂದ  ಬಾಷಣ ಮತ್ತು   ದೇಶಭಕ್ತಿಗೀತೆಗಳು  ಜರಗಿತು .

No comments:

Post a Comment

Popular Posts